Kumbla Sub Dist School Kalotsavam @ SNHS Perla
Tuesday, 19 August 2014
Thursday, 14 August 2014
ಪರಿಸರ ಜಾಗೃತಿ ಅಭಿಯಾನ: ಧರ್ಮಸ್ಥಳ ಗ್ರಾಮಿನಣಾಭಿವೃದ್ಧಿ ಯೋಜನೆ .ಪೆರ್ಲ ವಲಯ ಮತ್ತು SN Nature Club ಇದರ ಜಂಟಿ ಆಶ್ರಯದಲ್ಲಿ ಇಂದು ಶಾಲಾ ಗ್ರಂಥಾಲಯ ಸಭಾಭವನದಲ್ಲಿ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮ ಜರಗಿತು. ಉಕ್ಕಿನಡ್ಕದ ಖ್ಯಾತ ವೈದ್ಯರಾದ ಡಾ। ಸಪ್ನಾ. ಜೆ. ಗೋವಿಂದ ಅವರು ಮಕ್ಕಳಲ್ಲಿ, ಪರಿಸರ ಪ್ರೇಮ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಧರ್ಮಸ್ಥಳ ಗ್ರಾಮಿನಣಾಭಿವೃದ್ಧಿ ಯೋಜನೆ .ಪೆರ್ಲ ವಲಯದ ಪದಾಧಿಕಾರಿಗಳಾದ ಬಿ.ಪಿ. ಶೇಣಿ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಗೋವಿಂದ ಜೋಷಿ ಅವರು ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಉಮೇಶ್.ಕೆ.ಪೆರ್ಲ ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಕುಮಾರಿ ಮೇಘಾ ಎಸ್.ಎನ್. ಕಾರ್ಯಕ್ರಮ ನಿರೂಪಿಸಿದ್ದಳು .
Wednesday, 13 August 2014
ಹತ್ತನೇ ತರಗತಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಬಗ್ಗೆ ರಕ್ಷಕರೊಂದಿಗೆ ಸಂವಾದ.
STEPS ನ ಆಧಾರದಂತೆ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳ ಕಲಿಕೆಯ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯರಾದ ಶ್ರೀ ಎಂ ಸುಬ್ರಹ್ಮಣ್ಯ -ಇವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಮಾಹಿತಿಯನ್ನಿತ್ತರು. ಹೆತ್ತವರಿಂದ ಉತ್ತಮ ಸ್ಪಂದನ ಮೂಡಿ ಬಂತು.PTA ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಪೆರ್ಲ ಅವರು ಅಧ್ಯಕ್ಷತೆ ವಹಿಸಿದ್ದರು.
ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್
ಅಧ್ಯಾಪಕರಾದ ಶ್ರೀ ಬಿ. ರಾಜೇಂದ್ರ,
ಶ್ರೀ ಎಸ್ ವೇಣುಗೋಪಾಲ
ಚಿತ್ರ ರಚನಾ ಸ್ಫರ್ದೆ :
ಚಿತ್ರ ರಚನಾ ಕಮ್ಮಟ :
ಯಕ್ಷಗಾನ ತರಬೇತಿ ಶಿಬಿರ : ಸಂಪನ್ಮೂಲ ವ್ಯಕ್ತಿ -ಉದಯಶಂಕರ ಆಮೈ
Tuesday, 12 August 2014
ವಿಶಿಷ್ಟ ರೀತಿಯ ರಸಪ್ರಶ್ನೆ : ಎಸ್.ಎನ್.ನೆಚರ್ ಕ್ಲಬ್ ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ -ಇವೆರಡರ ಜಂಟಿ ಆಶ್ರಯದಲ್ಲಿ ,ಇಂದು ಮಧ್ಯಾಹ್ನ ನಮ್ಮ ಶಾಲೆಯಲ್ಲಿ ಒಂದು ವಿಶಿಷ್ಟ ರಸಪ್ರಶ್ನೆ ಜರಗಿತು. ಆಯುರ್ವೇದ ಗಿಡ ಮೂಲಿಕೆಗಳು ಮತ್ತು ಸಾಂಬಾರ ವಸ್ತುಗಳನ್ನು ನೋಡಿ,ವಾಸನೆ ಗ್ರಹಿಸುವುದರ ಮೂಲಕ ವಸ್ತುಗಳನ್ನು ಪತ್ತೆ ಹಚ್ಚುವುದರ ಮೂಲಕ ಮಕ್ಕಳು ತಮ್ಮ ಸಾಮರ್ಥ್ಯವನ್ನು ಮೆರೆದರು. ಹೈಸ್ಕೂಲ್ ವಿಭಾಗದಲ್ಲಿ ಪ್ರಥಮ -ಅಶ್ವಿನ್.ಎಮ್ 10A,ದ್ವಿತೀಯ -ಸುನಿಲ್ ಕುಮಾರ್ -10 B .ಯು.ಪಿ ವಿಭಾಗದಲ್ಲಿ ಪ್ರಥಮ-ಉಲ್ಲಾಸ್.ಕೆ.ಯು 6A,ದ್ವಿತೀಯ-ಶರಣ್ ಕುಮಾರ್ 7A,ಸೌಮ್ಯ.ಕೆ 7C.
Friday, 8 August 2014
ಸಾಕ್ಷರ ಯೋಜನೆ -ಉದ್ಘಾಟನೆ :
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಈ ಯೋಜನೆಯನ್ನು ನಮ್ಮ ಶಾಲೆಯಲ್ಲಿ ನಿನ್ನೆ ಉದ್ಘಾಟಿಸಲಾಯಿತು (6-8-2014). ಎಣ್ಮಕಜೆ ಪಂಚಾಯತಿನ ವಿದ್ಯಾಭ್ಯಾಸ ಸ್ಟ್ಯಾಂಡಿಂಗ್ ಕಮಿಟಿ ಚೇರ್ಮೇನ್ ಶ್ರೀ ಬಿ.ಎಸ್ ಗಾಂಭೀರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ರಹಮಾನ್ (PTA ಅಧ್ಯಕ್ಷರು )ಅಧ್ಯಕ್ಷತೆ ವಹಿಸಿದ್ದರು. U.P.ವಿಭಾಗದ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು.
Subscribe to:
Posts (Atom)



.jpg)
.jpg)
.jpg)
.jpg)
.jpg)
.jpg)






