Kumbla Sub Dist School Kalotsavam @ SNHS Perla

Welcome to SNHS Perla

Friday 26 September 2014

ಮಂಗಳನಲ್ಲಿ ಭಾರತ ...  ನಮ್ಮ ಮುಖದಲ್ಲಿ ಸಂತಸ ... 
ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ರಾಜೇಂದ್ರ .ಬಿ. ಇವರು ಮಕ್ಕಳಿಗೆ ಸಿಹಿತಿಂಡಿ ನೀಡುತ್ತಿರುವುದು.

  ನಮ್ಮ ಶಾಲೆಯಲ್ಲಿ, ಮಂಗಳನಲ್ಲಿಗೆ  ಕಳುಹಿಸಲಾದ ಭಾರತದ ಉಪಗ್ರಹ "MOM " ಇದರ ಯಶಸ್ಸಿನ  ಸಂಭ್ರಮವನ್ನು ಹಬ್ಬದ  ರೀತಿ ಆಚರಿಸಲಾಯಿತು.   ಇದರಿಂದ ಪ್ರಯೋಜನ , ಹಾಗೂ ಇದು ನಡೆಸಬಲ್ಲ ಕಾರ್ಯಗಳ ಬಗ್ಗೆ ಮಕ್ಕಳಿಗೆ ತಿಳಿಯಪಡಿಸಲಾಯಿತು. ಅಧ್ಯಾಪಕರು ವಿಧ್ಯಾರ್ಥಿಗಳಿಗೆ ಸಿಹಿತಿಂಡಿ ನಿಡುವ ಮೂಲಕ ಸಂತೋಷವನ್ನು ಹಂಚಿಕೊಳ್ಳಲಾಯಿತು. 

Wednesday 24 September 2014

ಗಣಿತ ರಸಪ್ರಶ್ನೆಯಲ್ಲಿ ಪ್ರಥಮ - ಉಪಜಿಲ್ಲಾ  ಮಟ್ಟದ ಯು.ಪಿ ವಿಭಾಗದ ಗಣಿತ ರಸಪ್ರಶ್ನೆಯಲ್ಲಿ  ನಮ್ಮ ಶಾಲೆಯ 7ನೇ ತರಗತಿಯ  ಗಣಪತಿ ಶರ್ಮ ಕೋಡ್ಮಾದು ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾಮಟ್ಟಕ್ಕೆ ತೇರ್ಗಡೆ ಹೊಂದಿರುತ್ತಾನೆ. ಅವನಿಗೆ ಹಾರ್ದಿಕ ಅಭಿನಂದನೆಗಳು . 
Congratulations to ISRO Team
ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು  'ಇಸ್ರೋ'ತಂಡವನ್ನು" ಮಂಗಳ ಯಾನ"ದ ಯಶಸ್ಸಿಗೆ ಅಭಿನಂದಿಸುತ್ತಿರುವುದು.
ಸಂಭ್ರಮ ಆಚರಿಸುತ್ತಿರುವ  "ಇಸ್ರೋ" ವಿಜ್ಞಾನಿಗಳ ತಂಡ

Monday 22 September 2014

ಮಕ್ಕಳ ಬಣ್ಣದ ಚಿತ್ರರಚನೆ ನೋಡಲು  Click  Childrens corner 

ಇಂದು ನಮ್ಮ ಶಾಲೆಯಲ್ಲಿ ಎಣ್ಮಕಜೆ ಪಂಚಾಯತ್ ಕೃಷಿ ಭವನದ ವತಿಯಿಂದ SN Nature Club ಸಹಬಾಗಿತ್ವದಲ್ಲಿ

ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಜರುಗಿತು. For more Details Please Visit :SN NatureClub.

Sunday 7 September 2014

For latest Orders Visit-Downloads

Congrtulations to Sri SN Bhat,Headmaster NHSS Peradala

ಉತ್ತಮ ಶಿಕ್ಷಕ -ರಾಜ್ಯ ಪ್ರಶಸ್ತಿ  ಪಡೆದ 'ಶಂಕರ್ ಸಾರಡ್ಕ' ಅವರಿಗೆ ಅಭಿನಂದನೆಗಳು.  

ಕೇರಳ ರಾಜ್ಯ ಸರಕಾರ ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಈ ವರ್ಷದ  ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೆರೆಯ ಶಾಲೆಯಾದ  ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯರಿಗೆ  ಗೌರವಿಸಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಕನ್ನಡಿಗರಿಗೆ ಸಂದ ಗೌರವ.   

Onam Wishes


Friday 5 September 2014

Prime Minister's Speech:

ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಂದ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಮಕ್ಕಳೊಂದಿಗೆ ಸಂವಾದ: 

ಕುತೂಹಲದಿಂದ  ವೀಕ್ಷಿಸುತ್ತಿರುವ ಮಕ್ಕಳು. 

Inauguration of SN ADDRESS System:

                               S.N Addressing System ಉದ್ಘಾಟನೆ,ಶಾಲಾ ಬ್ಲೋಗ್ ನ ಅಧಿಕೃತ ಚಾಲನೆ:
Our Blog was Inaugurated by PTA President Sri Venugopal.M 


SN ADDRESS System Inaugurated by  Panchayath Standing Committe Chairman Sri B.S Gambhir


ಓಣಂ ಹಬ್ಬದ ಸ್ಪರ್ಧೆಯ ಬಹುಮಾನ ವಿತರಣೆ ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಅಮೆಕ್ಕಳ ಅವರು ನಡೆಸಿಕೊಟ್ಟರು.   . 
 Panchayath Standing Committe Chairman Sri B.S Gambhir
                                   


Onam Celebration:

ನಮ್ಮ ಶಾಲೆಯಲ್ಲಿ ಓಣಂ ಆಚರಣೆ:

ಪೂಕ್ಕಳಂ ಸ್ಪರ್ಧೆ. 


ಹುಡುಗರಲ್ಲೂ ಉತ್ಸಾಹ 


                                                              ಹಗ್ಗ -ಜಗ್ಗಾಟ ಸ್ಪರ್ಧೆ:

 ಅಧ್ಯಾಪಕರ ಪ್ರೋತ್ಸಾಹ 
ಎಲ್ಲಾ ತರಗತಿಯ ಮಕ್ಕಳಿಗೂ ಸ್ಪರ್ಧೆಯಲ್ಲಿ ಅವಕಾಶ 

                                                      ಓಣಂ ಪ್ರಯುಕ್ತ ಪಾಯಸದ ಊಟ :

ಊಟ ನೀಡುವಲ್ಲಿ ಸಹಕರಿಸಿದ ಅಧ್ಯಾಪಕ -ಅಧ್ಯಾಪಿಕೆಯರು. 

ಓಣಂ ಹಬ್ಬವನ್ನು ಉತ್ಸಾಹದಿಂದ ಆಚರಿಸಿದ ಅಧ್ಯಾಪಿಕೆಯರು. 


Teacher's Day


ಅಧ್ಯಾಪಕ ದಿನಾಚರಣೆ :- ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರನ್ನು ಗೌರವಿಸುವುದರ ಮೂಲಕ ಅಧ್ಯಾಪಕ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳು ಅಧ್ಯಾಪಕರಿಗೆ ಹೂ ಮತ್ತು ಗ್ರೀಟಿಂಗ್ಸ್ ಕಾರ್ಡ್ ನೀಡಿ ಗೌರವಿಸಿದರು.


ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಸಿ. ಗೋವಿಂದ ಜೋಯಿಷ್ ಅವರು ಅಧ್ಯಕ್ಷತೆ ವಹಿಸಿದರು. 

ಎಲ್ಲಾ ವಿದ್ಯಾರ್ಥಿ ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 

ಗೌರವವನ್ನು ತುಂಬು ಹೃದಯದಿಂದ ಸ್ವೀಕರಿಸಿದ ಅಧ್ಯಾಪಕರು 

ಎಲ್ಲಾ ಅಧ್ಯಾಪಕರ ಉಪಸ್ಥಿತಿ. 


HAPPY TEACHER'S DAY

HAPPY TEACHER'S DAY

Teacher Day,Inauguration of S.N Addressing System & Our Blog.

ಪೆರ್ಲದ ಸತ್ಯನಾರಾಯಣ  ಹೈಸ್ಕೂಲಿನಲ್ಲಿ ಇಂದು-S.N Addressing System ಉದ್ಘಾಟನೆ,ಶಾಲಾ  ಬ್ಲೋಗ್  ನ ಅಧಿಕೃತ ಚಾಲನೆ, ಅಧ್ಯಾಪಕ ದಿನಾಚರಣೆ-.S.N Addressing System ಎಂಬ ವ್ಯವಸ್ಥೆ ಬಹಳ ನೂತನವಾದುದು.ಮುಖ್ಯೋಪಾಧ್ಯಾಯರ ಚೇಂಬರ್ ನಿಂದ ಎಲ್ಲಾ ತರಗತಿಗಳಿಗೂ ಪ್ರತ್ಯೇಕ ಧ್ವನಿವರ್ಧಕ ವ್ಯವಸ್ಥೆ.ಯಾವುದೇ ಮಾಹಿತಿಯನ್ನೂ ನೇರವಾಗಿ,ಕೂಡಲೇ ಮಕ್ಕಳಿಗೆ ತಲುಪಿಸುವ ವ್ಯವಸ್ಥೆ.ಅದೇ ರೀತಿ ಯು.ಪಿ ಮತ್ತು ಹೈಸ್ಕೂಲ್ ಅಧ್ಯಾಪಕರ ಕೊಠಡಿಗಳಿಗೆ ಮುಖ್ಯೋಪಾಧ್ಯಾಯರ ಮಾತುಗಳನ್ನು ನೇರವಾಗಿ ಪ್ರಸಾರ ಮಾಡುವ ವ್ಯವಸ್ಥೆ ಇದರಲ್ಲಿ ಇರುತ್ತದೆ.ಕಾಸರಗೋಡು ಜಿಲ್ಲೆಯಲ್ಲೇ ಈ ವ್ಯವಸ್ಥೆಯಿರುವ ಪ್ರಥಮ ಹೈಸ್ಕೂಲು ನಮ್ಮದಾಗಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇವೆ.ಇದಕ್ಕೆ ಹಳೆವಿದ್ಯಾರ್ಥಿಗಳು,ಪೋಷಕರು,ಅಧ್ಯಾಪಕರು ಕೊಡುಗೆಯನ್ನು ನೀಡಿರುತ್ತಾರೆ.ಅವರೆಲ್ಲರಿಗೆ ತುಂಬು ಹೃದಯದ ಧನ್ಯವಾದಗಳು.ಇದೇರೀತಿ ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.ಎಲ್ಲಾ ತರಗತಿಗಳಿಗೆ ಸಿ.ಸಿ.ಟಿವಿ ಅಳವಡಿಸುವ ಯೋಜನೆ ಕೂಡಾ ನಮ್ಮ ಮುಂದೆ ಇದೆ-ನಿಮ್ಮೆಲ್ಲರ ಸಹಕಾರವನ್ನು ಕೋರುತ್ತೇವೆ

Thursday 4 September 2014

ನಮ್ಮ' ಬ್ಲೋಗ್ 'ಗೆ ಅಧಿಕೃತ ಚಾಲನೆ ನಾಳೆ -ನಮ್ಮ ಪಿ.ಟಿ.ಎ ಅಧ್ಯಕ್ಷ  ಶ್ರೀ ವೇಣುಗೊಪಲ .ಎಂ. ಇವರಿಂದ.