Kumbla Sub Dist School Kalotsavam @ SNHS Perla

Welcome to SNHS Perla

Saturday 30 August 2014

Ganesha chaturthi at Perla.

ಶ್ರೀ ಭಾಗವತ ಪಾರಾಯಣ- ಶ್ರೀ ಮಾಧವನ್ ನಂಬೂದಿರಿ ಅವರಿಂದ 

ಶೋಭಾಯಾತ್ರೆಗೂ  ಮೊದಲಿನ ಚೆಂಡೆ ವಾದನ (ಸಿಂಗಾರಿ ಮೇಳ )  ಶ್ರೀ ದೇವರ ಸನ್ನಿಧಿಯಲ್ಲಿ 

Ganesha chaturthi at Perla.


    ನಮ್ಮ ಶಾಲೆಯಲ್ಲಿ ಗಣೇಶ ಚತುರ್ಥಿ -

ಹಸಿರು ತೋರಣಗಳಿಂದ ಕಂಗೊಳಿಸುತ್ತಿರುವ ಶ್ರೀ ಸತ್ಯನಾರಾಯಣ ಮಂದಿರ 

ಶ್ರೀ ಗಣೇಶನಿಗೆ ಪೂಜೆ 

ಧಾರ್ಮಿಕ ಭಾಷಣ ಮಾಡುತ್ತಿರುವ ಶ್ರೀ ವೇ. ಮೂ. ಪಳ್ಳತ್ತಡ್ಕ ಪರಮೇಶ್ವರ ಭಟ್ಟರು.ನಮ್ಮ ಹಳೆ ವಿದ್ಯಾರ್ಥಿಯಾದ ಶ್ರೀ ಸದಾನಂದ ಪೆರ್ಲ(ಮಂಗಳೂರು ಆಕಾಶವಾಣಿ) ಅಧ್ಯಕ್ಷತೆ ವಹಿಸಿದ್ದರು.  

'ಗುರುದಕ್ಷಿಣೆ 'ಯಕ್ಷಗಾನ ತಾಳಮದ್ದಳೆ ಯಲ್ಲಿ ಅರ್ಥಧಾರಿಗಳಾಗಿ ಅಧ್ಯಾಪಕರಾದ ಉದಯಶಂಕರ  ಅಮೈ . 
ಶ್ರೀ ದೇವರ ಪೂಜೆ 
ಪೆರ್ಲದ ಗಣಪ 
             ಇಂದು ಅಪರಾಹ್ಣ 2.00 ಗಂಟೆಗೆ ಶೋಭಾಯಾತ್ರೆಯೊಂದಿಗೆ ಗಣೇಶನ ವಿಸರ್ಜನೆ ನಡೆಯಲಿದೆ. 

Friday 29 August 2014

                              ಗಣೇಶ ಚತುರ್ಥಿಯ ಶುಭಾಶಯಗಳು

Wednesday 27 August 2014

New PTA President

PTA ಅಧ್ಯಕ್ಷ ಅಬ್ದುಲ್ ರಹ್ಮಾನ್  ರಾಜೀನಾಮೆ-ಹೊಸ ಅಧ್ಯಕ್ಷರಾಗಿ -ವೇಣುಗೋಪಾಲ. ಎಮ್
PTA ಅಧ್ಯಕ್ಷರಾಗಿದ್ದ  ಶ್ರೀ ಅಬ್ದುಲ್ ರಹ್ಮಾನ್ ಅವರ ರಾಜೀನಾಮೆ  ಕಾರಣದಿಂದ ತೆರವಾದ ಸ್ಥಾನವನ್ನು ಶ್ರೀ ವೇಣುಗೋಪಾಲ.ಎನ್  ಅವರು ಅಲಂಕರಿಸಿದ್ದಾರೆ.ನಮ್ಮ  DEO ಅವರಾದ ಶ್ರೀ ಸದಾಶಿವ ನಾಯಕ್  ಅವರ ಉಪಸ್ಥಿತಿಯಲ್ಲಿ
ಶ್ರೀ ವೇಣುಗೋಪಾಲ.ಎಮ್  ಅವರ ಆಯ್ಕೆ ನಡೆಯಿತು. 

Monday 25 August 2014

POC AMRUTHESHWARI C H has been awarded NCC CWS scholarship Rs. 6000/ for the year 2013-14

School Manager Shrikrishna Vishwamithra hand over the cheque to Kum. Amrutheshwari C H 

Friday 22 August 2014


Kumbla Sub-Dist.Chess Competition :
 Kumbla Sub-Dist.Chess Competition was held at our school on 21.08.2104






Wednesday 20 August 2014

ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ:

 ಶಾಲಾ ವಿದ್ಯಾರ್ಥಿನಿಯರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿ ಗಳಿಗೆ ರಾಜ್ಯ ಸರಕಾರ ಕೊಡಮಾಡಿದ ಸಮವಸ್ತ್ರದ ಬಟ್ಟೆಗಳನ್ನು ಇಂದು ವಿತರಿಸಲಾಯಿತು. ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. 




Tuesday 19 August 2014


ಸಂಸ್ಕೃತೋತ್ಸವದ  ವಿಜೇತರು  : ಇತ್ತೀಚೆಗೆ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲೆಯ ಸಂಸ್ಕೃತೋತ್ಸವದಲ್ಲಿ ನಮ್ಮ ಶಾಲೆಯ ಮಕ್ಕಳು ವಿಜೇತರಾಗಿದ್ದಾರೆ.   

ಹೈಸ್ಕೂಲುವಿಭಾಗದ ದೇಶಭಕ್ತಿಗೀತೆ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು.     

ಯು.ಪಿ  ವಿಭಾಗದ ಸಮೂಹ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು


Friday 15 August 2014

68ನೇ ಸ್ವಾತಂತ್ರ್ಯೋತ್ಸವ  ನಮ್ಮ ಶಾಲೆಯಲ್ಲಿ:

ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ನಡೆಸಿದರು . ಮಕ್ಕಳ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. 




Thursday 14 August 2014

ಪರಿಸರ ಜಾಗೃತಿ ಅಭಿಯಾನ:  ಧರ್ಮಸ್ಥಳ  ಗ್ರಾಮಿನಣಾಭಿವೃದ್ಧಿ  ಯೋಜನೆ .ಪೆರ್ಲ ವಲಯ ಮತ್ತು SN Nature Club ಇದರ ಜಂಟಿ ಆಶ್ರಯದಲ್ಲಿ ಇಂದು ಶಾಲಾ ಗ್ರಂಥಾಲಯ ಸಭಾಭವನದಲ್ಲಿ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮ ಜರಗಿತು. ಉಕ್ಕಿನಡ್ಕದ ಖ್ಯಾತ ವೈದ್ಯರಾದ ಡಾ। ಸಪ್ನಾ. ಜೆ. ಗೋವಿಂದ ಅವರು ಮಕ್ಕಳಲ್ಲಿ, ಪರಿಸರ ಪ್ರೇಮ  ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಧರ್ಮಸ್ಥಳ  ಗ್ರಾಮಿನಣಾಭಿವೃದ್ಧಿ  ಯೋಜನೆ .ಪೆರ್ಲ ವಲಯದ ಪದಾಧಿಕಾರಿಗಳಾದ ಬಿ.ಪಿ. ಶೇಣಿ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಗೋವಿಂದ ಜೋಷಿ ಅವರು ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಉಮೇಶ್.ಕೆ.ಪೆರ್ಲ  ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಕುಮಾರಿ ಮೇಘಾ ಎಸ್.ಎನ್. ಕಾರ್ಯಕ್ರಮ ನಿರೂಪಿಸಿದ್ದಳು . 




Wednesday 13 August 2014

 ಹತ್ತನೇ ತರಗತಿಯ ವಿದ್ಯಾರ್ಥಿಗಳು  ಉತ್ತಮ ಫಲಿತಾಂಶ ಪಡೆಯುವ ಬಗ್ಗೆ  ರಕ್ಷಕರೊಂದಿಗೆ ಸಂವಾದ. 
STEPS ನ ಆಧಾರದಂತೆ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳ ಕಲಿಕೆಯ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯರಾದ  ಶ್ರೀ ಎಂ ಸುಬ್ರಹ್ಮಣ್ಯ -ಇವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಮಾಹಿತಿಯನ್ನಿತ್ತರು. ಹೆತ್ತವರಿಂದ ಉತ್ತಮ ಸ್ಪಂದನ ಮೂಡಿ ಬಂತು.PTA ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಪೆರ್ಲ ಅವರು ಅಧ್ಯಕ್ಷತೆ ವಹಿಸಿದ್ದರು. 
   
ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್ 




                                                        ಅಧ್ಯಾಪಕರಾದ ಶ್ರೀ ಬಿ. ರಾಜೇಂದ್ರ,
                                                             ಶ್ರೀ ಎಸ್  ವೇಣುಗೋಪಾಲ
                                     ಚಿತ್ರ ರಚನಾ ಸ್ಫರ್ದೆ :




ಚಿತ್ರ ರಚನಾ ಕಮ್ಮಟ :




  ಯಕ್ಷಗಾನ ತರಬೇತಿ ಶಿಬಿರ : ಸಂಪನ್ಮೂಲ ವ್ಯಕ್ತಿ -ಉದಯಶಂಕರ ಆಮೈ 

Tuesday 12 August 2014

ವಿಶಿಷ್ಟ  ರೀತಿಯ ರಸಪ್ರಶ್ನೆ : ಎಸ್.ಎನ್.ನೆಚರ್ ಕ್ಲಬ್  ಮತ್ತು ಧರ್ಮಸ್ಥಳ  ಗ್ರಾಮೀಣಾಭಿವೃದ್ಧಿ  ಯೋಜನೆ -ಇವೆರಡರ ಜಂಟಿ ಆಶ್ರಯದಲ್ಲಿ ,ಇಂದು ಮಧ್ಯಾಹ್ನ ನಮ್ಮ ಶಾಲೆಯಲ್ಲಿ ಒಂದು ವಿಶಿಷ್ಟ ರಸಪ್ರಶ್ನೆ ಜರಗಿತು. ಆಯುರ್ವೇದ ಗಿಡ ಮೂಲಿಕೆಗಳು  ಮತ್ತು ಸಾಂಬಾರ ವಸ್ತುಗಳನ್ನು ನೋಡಿ,ವಾಸನೆ ಗ್ರಹಿಸುವುದರ ಮೂಲಕ ವಸ್ತುಗಳನ್ನು ಪತ್ತೆ ಹಚ್ಚುವುದರ ಮೂಲಕ ಮಕ್ಕಳು ತಮ್ಮ ಸಾಮರ್ಥ್ಯವನ್ನು ಮೆರೆದರು. ಹೈಸ್ಕೂಲ್  ವಿಭಾಗದಲ್ಲಿ ಪ್ರಥಮ -ಅಶ್ವಿನ್.ಎಮ್  10A,ದ್ವಿತೀಯ -ಸುನಿಲ್ ಕುಮಾರ್ -10 B .ಯು.ಪಿ  ವಿಭಾಗದಲ್ಲಿ ಪ್ರಥಮ-ಉಲ್ಲಾಸ್.ಕೆ.ಯು 6A,ದ್ವಿತೀಯ-ಶರಣ್ ಕುಮಾರ್ 7A,ಸೌಮ್ಯ.ಕೆ 7C.






Friday 8 August 2014


ಸಾಕ್ಷರ  ಯೋಜನೆ -ಉದ್ಘಾಟನೆ :
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ  ಈ ಯೋಜನೆಯನ್ನು  ನಮ್ಮ ಶಾಲೆಯಲ್ಲಿ ನಿನ್ನೆ ಉದ್ಘಾಟಿಸಲಾಯಿತು (6-8-2014). ಎಣ್ಮಕಜೆ ಪಂಚಾಯತಿನ ವಿದ್ಯಾಭ್ಯಾಸ ಸ್ಟ್ಯಾಂಡಿಂಗ್  ಕಮಿಟಿ ಚೇರ್ಮೇನ್  ಶ್ರೀ ಬಿ.ಎಸ್ ಗಾಂಭೀರ್ ಈ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ರಹಮಾನ್ (PTA ಅಧ್ಯಕ್ಷರು )ಅಧ್ಯಕ್ಷತೆ  ವಹಿಸಿದ್ದರು. U.P.ವಿಭಾಗದ  ಎಲ್ಲಾ ಅಧ್ಯಾಪಕರು  ಉಪಸ್ಥಿತರಿದ್ದರು.