Kumbla Sub Dist School Kalotsavam @ SNHS Perla

Welcome to SNHS Perla

Friday, 5 September 2014

Onam Celebration:

ನಮ್ಮ ಶಾಲೆಯಲ್ಲಿ ಓಣಂ ಆಚರಣೆ:

ಪೂಕ್ಕಳಂ ಸ್ಪರ್ಧೆ. 


ಹುಡುಗರಲ್ಲೂ ಉತ್ಸಾಹ 


                                                              ಹಗ್ಗ -ಜಗ್ಗಾಟ ಸ್ಪರ್ಧೆ:

 ಅಧ್ಯಾಪಕರ ಪ್ರೋತ್ಸಾಹ 
ಎಲ್ಲಾ ತರಗತಿಯ ಮಕ್ಕಳಿಗೂ ಸ್ಪರ್ಧೆಯಲ್ಲಿ ಅವಕಾಶ 

                                                      ಓಣಂ ಪ್ರಯುಕ್ತ ಪಾಯಸದ ಊಟ :

ಊಟ ನೀಡುವಲ್ಲಿ ಸಹಕರಿಸಿದ ಅಧ್ಯಾಪಕ -ಅಧ್ಯಾಪಿಕೆಯರು. 

ಓಣಂ ಹಬ್ಬವನ್ನು ಉತ್ಸಾಹದಿಂದ ಆಚರಿಸಿದ ಅಧ್ಯಾಪಿಕೆಯರು. 


Teacher's Day


ಅಧ್ಯಾಪಕ ದಿನಾಚರಣೆ :- ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರನ್ನು ಗೌರವಿಸುವುದರ ಮೂಲಕ ಅಧ್ಯಾಪಕ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳು ಅಧ್ಯಾಪಕರಿಗೆ ಹೂ ಮತ್ತು ಗ್ರೀಟಿಂಗ್ಸ್ ಕಾರ್ಡ್ ನೀಡಿ ಗೌರವಿಸಿದರು.


ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಸಿ. ಗೋವಿಂದ ಜೋಯಿಷ್ ಅವರು ಅಧ್ಯಕ್ಷತೆ ವಹಿಸಿದರು. 

ಎಲ್ಲಾ ವಿದ್ಯಾರ್ಥಿ ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 

ಗೌರವವನ್ನು ತುಂಬು ಹೃದಯದಿಂದ ಸ್ವೀಕರಿಸಿದ ಅಧ್ಯಾಪಕರು 

ಎಲ್ಲಾ ಅಧ್ಯಾಪಕರ ಉಪಸ್ಥಿತಿ. 


HAPPY TEACHER'S DAY

HAPPY TEACHER'S DAY

Teacher Day,Inauguration of S.N Addressing System & Our Blog.

ಪೆರ್ಲದ ಸತ್ಯನಾರಾಯಣ  ಹೈಸ್ಕೂಲಿನಲ್ಲಿ ಇಂದು-S.N Addressing System ಉದ್ಘಾಟನೆ,ಶಾಲಾ  ಬ್ಲೋಗ್  ನ ಅಧಿಕೃತ ಚಾಲನೆ, ಅಧ್ಯಾಪಕ ದಿನಾಚರಣೆ-.S.N Addressing System ಎಂಬ ವ್ಯವಸ್ಥೆ ಬಹಳ ನೂತನವಾದುದು.ಮುಖ್ಯೋಪಾಧ್ಯಾಯರ ಚೇಂಬರ್ ನಿಂದ ಎಲ್ಲಾ ತರಗತಿಗಳಿಗೂ ಪ್ರತ್ಯೇಕ ಧ್ವನಿವರ್ಧಕ ವ್ಯವಸ್ಥೆ.ಯಾವುದೇ ಮಾಹಿತಿಯನ್ನೂ ನೇರವಾಗಿ,ಕೂಡಲೇ ಮಕ್ಕಳಿಗೆ ತಲುಪಿಸುವ ವ್ಯವಸ್ಥೆ.ಅದೇ ರೀತಿ ಯು.ಪಿ ಮತ್ತು ಹೈಸ್ಕೂಲ್ ಅಧ್ಯಾಪಕರ ಕೊಠಡಿಗಳಿಗೆ ಮುಖ್ಯೋಪಾಧ್ಯಾಯರ ಮಾತುಗಳನ್ನು ನೇರವಾಗಿ ಪ್ರಸಾರ ಮಾಡುವ ವ್ಯವಸ್ಥೆ ಇದರಲ್ಲಿ ಇರುತ್ತದೆ.ಕಾಸರಗೋಡು ಜಿಲ್ಲೆಯಲ್ಲೇ ಈ ವ್ಯವಸ್ಥೆಯಿರುವ ಪ್ರಥಮ ಹೈಸ್ಕೂಲು ನಮ್ಮದಾಗಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇವೆ.ಇದಕ್ಕೆ ಹಳೆವಿದ್ಯಾರ್ಥಿಗಳು,ಪೋಷಕರು,ಅಧ್ಯಾಪಕರು ಕೊಡುಗೆಯನ್ನು ನೀಡಿರುತ್ತಾರೆ.ಅವರೆಲ್ಲರಿಗೆ ತುಂಬು ಹೃದಯದ ಧನ್ಯವಾದಗಳು.ಇದೇರೀತಿ ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.ಎಲ್ಲಾ ತರಗತಿಗಳಿಗೆ ಸಿ.ಸಿ.ಟಿವಿ ಅಳವಡಿಸುವ ಯೋಜನೆ ಕೂಡಾ ನಮ್ಮ ಮುಂದೆ ಇದೆ-ನಿಮ್ಮೆಲ್ಲರ ಸಹಕಾರವನ್ನು ಕೋರುತ್ತೇವೆ

Thursday, 4 September 2014

ನಮ್ಮ' ಬ್ಲೋಗ್ 'ಗೆ ಅಧಿಕೃತ ಚಾಲನೆ ನಾಳೆ -ನಮ್ಮ ಪಿ.ಟಿ.ಎ ಅಧ್ಯಕ್ಷ  ಶ್ರೀ ವೇಣುಗೊಪಲ .ಎಂ. ಇವರಿಂದ.

Saturday, 30 August 2014

Ganesha chaturthi at Perla.

ಶ್ರೀ ಭಾಗವತ ಪಾರಾಯಣ- ಶ್ರೀ ಮಾಧವನ್ ನಂಬೂದಿರಿ ಅವರಿಂದ 

ಶೋಭಾಯಾತ್ರೆಗೂ  ಮೊದಲಿನ ಚೆಂಡೆ ವಾದನ (ಸಿಂಗಾರಿ ಮೇಳ )  ಶ್ರೀ ದೇವರ ಸನ್ನಿಧಿಯಲ್ಲಿ 

Ganesha chaturthi at Perla.


    ನಮ್ಮ ಶಾಲೆಯಲ್ಲಿ ಗಣೇಶ ಚತುರ್ಥಿ -

ಹಸಿರು ತೋರಣಗಳಿಂದ ಕಂಗೊಳಿಸುತ್ತಿರುವ ಶ್ರೀ ಸತ್ಯನಾರಾಯಣ ಮಂದಿರ 

ಶ್ರೀ ಗಣೇಶನಿಗೆ ಪೂಜೆ 

ಧಾರ್ಮಿಕ ಭಾಷಣ ಮಾಡುತ್ತಿರುವ ಶ್ರೀ ವೇ. ಮೂ. ಪಳ್ಳತ್ತಡ್ಕ ಪರಮೇಶ್ವರ ಭಟ್ಟರು.ನಮ್ಮ ಹಳೆ ವಿದ್ಯಾರ್ಥಿಯಾದ ಶ್ರೀ ಸದಾನಂದ ಪೆರ್ಲ(ಮಂಗಳೂರು ಆಕಾಶವಾಣಿ) ಅಧ್ಯಕ್ಷತೆ ವಹಿಸಿದ್ದರು.  

'ಗುರುದಕ್ಷಿಣೆ 'ಯಕ್ಷಗಾನ ತಾಳಮದ್ದಳೆ ಯಲ್ಲಿ ಅರ್ಥಧಾರಿಗಳಾಗಿ ಅಧ್ಯಾಪಕರಾದ ಉದಯಶಂಕರ  ಅಮೈ . 
ಶ್ರೀ ದೇವರ ಪೂಜೆ 
ಪೆರ್ಲದ ಗಣಪ 
             ಇಂದು ಅಪರಾಹ್ಣ 2.00 ಗಂಟೆಗೆ ಶೋಭಾಯಾತ್ರೆಯೊಂದಿಗೆ ಗಣೇಶನ ವಿಸರ್ಜನೆ ನಡೆಯಲಿದೆ.